ಬಿಗ್ ಬಾಸ್ ಕನ್ನಡ ಸೀಸನ್ 5 : ಮೇಘ ಅವರ ಆಸೆ ಸೀರಿಯಲ್ ನಟಿ ಆಗಬೇಕು ಅಂತ | Filmibeat Kannada

2017-10-31 2

Bigg Boss Kannada 5: Megha, who got eliminated in the 2nd week is currently studying B A & her wish is to become serial actress.


ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದಿಂದ ಕೊಡಗಿನ ಬೆಡಗಿ ಮೇಘ ಔಟ್ ಆಗಿದ್ದಾರೆ. ಶನಿವಾರಸಂತೆಯ ಹಾರೆಹೊಸೂರು ಗ್ರಾಮದ ಹುಡುಗಿ ಮೇಘ ರ 'ಬಿಗ್ ಬಾಸ್' ಜರ್ನಿ ಎರಡೇ ವಾರಕ್ಕೆ ಕೊನೆಯಾಗಿದೆ. ಯಾವುದೇ ಪ್ಲಾನ್ನಿಂಗ್ ಇಲ್ಲದೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಘ, ಯಾವುದೇ ವಿವಾದಗಳಿಗೆ ಸಿಲುಕದೆ, ಸೈಲೆಂಟ್ ಆಗಿ ಹೊರಬಂದಿದ್ದಾರೆ.ಸದ್ಯಕ್ಕೆ ಬಿ.ಎ ವ್ಯಾಸಂಗ ಮಾಡುತ್ತಿರುವ ಮೇಘಗೆ ಸೀರಿಯಲ್ ನಟಿ ಆಗಬೇಕು ಎಂಬ ಆಸೆ ಇದ್ಯಂತೆ. ಧಾರಾವಾಹಿಗಳಲ್ಲಿ ಅಭಿನಯಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ ಮೇಘ. ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು 'ಬಿಗ್ ಬಾಸ್' ಮನೆ ಸೇರುವಲ್ಲಿ ಯಶಸ್ವಿ ಆದ ಮೇಘ ಸೀರಿಯಲ್ ನಟಿ ಆಗುತ್ತಾರಾ.? ಮೇಘ ಕನಸನ್ನು ಕಲರ್ಸ್ ವಾಹಿನಿ ಈಡೇರಿಸುತ್ತಾ.? ನೋಡೋಣ...ಇನ್ನಷ್ಟು ಹೆಚ್ಚಿನ ಮಾಹಿತಿಗೆ ಫಾಲೋ ಮಾಡಿ ನಮ್ಮ ಫಿಲ್ಮಿಬೀಟ್ ಕನ್ನಡ.

Videos similaires